ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು ಬೇಡಿ
ಹುಚ್ಚಪ್ಪಗಳಿರಾ || ಪ ||
ಕಣ್ಣು ಕೈ ಕಾಲ್ ಕಿವಿ ನಾಲಿಗೆ
ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಾಣ್ಣಿಗಾಗಿ
ಹರಿಯ ನಾಮಾಮೃತ ಉಣ್ಣದೆ
ಉಪವಾಸ ಇರುವರೆ ಖೋಡಿ || ೧ ||
ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆಂದರೆ ಕೇಳುವರೆ
ಧಾಳಿ ಬಾರದ ಮುನ್ನ
ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ
ಸಿಕ್ಕಲು ಬೇಡಿ || ೨ ||
ಏನು ಕಾರಣ ಯದು
ಪತಿಯನು ಮರೆತಿರಿ
ಧನಧಾನ್ಯ ಪುತ್ರರು ಕಾಯುವರೆ
ಇನ್ನಾದರು ಏಕೋ ಭಾವದಿ ಭಜಿಸಿರೋ
ಚೆನ್ನ ಶ್ರೀ ಪುರಂದರ ವಿಠಲ ರಾಯನ || ೩ ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.